ನನ್ನ ಪ್ರೀತಿಯ ಚಂದನ್,ಗೆ
ನಿನ್ನ ಪ್ರೀತಿಯ ಚೈತ್ರ ನೀಡುವ ಸಿಹಿ ಮುತ್ತುಗಳು...
ನನ್ನದು ಬಿಸಿಲಿಗೆ ಬಾಡುವ
ಬಿರುಗಾಳಿಗೆ ಎದುರಿ ಬೀಳುವ
ಹೂವಿನಂತಹ ಪ್ರೀತಿ ಅಲ್ಲ
ಅದು
ಸದಾ ನಳನಳಿಸುವ ಹೂವಿನಂತಹ ಪ್ರೀತಿ...
ನಾನು ನಿನ್ನನ್ನು ಮೊದಲ ಕ್ಷಣ ನೋಡಿದ ದಿನವೇ, ನನ್ನ ಮನಸ್ಸಿನಲ್ಲಿ ಒಂದು ಕಾಂತಿಯು ಮೂಡಿತು.
ಆದರೆ ನಿನ್ನ ಬಳಿ ಬಂದು ಹೇಳಲು ನನಗೆ ಭಯವಾಗುತ್ತಿತ್ತು .
ನಿನ್ನ ಮೇಲೆ ನನಗೆ ಪ್ರಿತೀ ಇದುದರಿಂದ ನೀನು ಎಲ್ಲಿ ಕರೆದರೂ ನಿನ್ನೊಡನೆ ಬರುತ್ತಿದ್ದೆ.
ನಿನ್ನ ಜೊತೆ ಸೇರಿ ಹಾಡು ಹೇಳುವಾಗಲೆಲ್ಲ ನನಗೆ ತುಂಬಾ ಸಂತೋಷವಾಗುತಿತ್ತು .
ನಿನ್ನನ್ನು ನೋಡಿದಾಗಲೆಲ್ಲೇ ನನ್ನ ಮನಸಿನಲ್ಲಿ ಒಂದು ರೀತಿಯ ಸಂತೋಷ ಆಗುತಿತ್ತು.
ನನನ್ನು ನೀನು ಒಂದು ನಾಟಕದಲ್ಲಿ ಪಾತ್ರಮಾಡಲು ಹೇಳಿದಾಗ ನನಗೆ ನನ್ನ ನಿಜ ಜೀವನದಲ್ಲಿ ನಿನ್ನ ಪ್ರೀತಿ ಸಿಗುವುದಿಲ್ಲ ಎಂದು ಅದಕ್ಕಾಗಿ ನನ್ನ ಆಸೆಯನ್ನು ನಾಟಕದಲ್ಲಿ ಪಾತ್ರವನ್ನು ಮಾಡಿ ತೀರಿಸಿಕೊಳ್ಳೋಣ ಎಂದು ಅನ್ನಿಸಿತು.
ಅದಕ್ಕೆ ನೀನು ಬಂದು ನನ್ನನು ಕೇಳಿದ ತಕ್ಷಣ ನಾನು ಒಪ್ಪಿಕೊಂಡೆ.
ನಾವೆಲ್ಲ ನಾಟಕವನ್ನು ಅಬ್ಯಾಸ ಮಾಡುತಿದ್ದಾಗ ಇದೆ ನನ್ನ ನಿಜವಾದ ಜಿವನವಾಗಿದರೆ ನಾನು ಸಂತೋಷವಾಗಿರುತ್ತಿದ್ದೆ ಎನಿಸುತ್ತಿತ್ತು. ನಿನ್ನ ಬಳಿ ನಾನು ನನ್ನ ಪ್ರೀತಿಯನ್ನು ವ್ಯಕ್ತಪಡಿಸೂನವೆಂದರೆ,
ಆಗ ನೀನು ನನ್ನನ್ನು ತಿರಸ್ಕರಿಸಿದರೆ ಅದನ್ನು ತಡಿಯುವ ಶಕ್ತಿ ನನಗಿರಲಿಲ್ಲ ಆದ್ದರಿಂದ ಈ ವಿಷಯದ ಬಗ್ಗೆ ನಾನು ನಾನು ನಿನ್ನ ಹತ್ತಿರ ಮಾತನಾಡುತಿರಲಿಲ್ಲ..
ಕಾಲೇಜ್ ಜೀವನ ಮುಗಿದ ನಂತರ ನನ್ನನ್ನು ಬಿಟ್ಟು ದುರವಾಗುತ್ತೀಯ ಎಂದು ನಾನು ತುಂಬಾ ಬೇಸರಗೊಂಡಿದ್ದೆ .
ಆದರೆ ಕೊನೆಯಲ್ಲಿ ನೀನು ನನ್ನನ್ನು ಪ್ರಿತಿಸುತ್ತಿರುವೆ ಎಂದು ತಿಳಿದಕೂಡಲೇ ನನಗೆ ತುಂಬಾ ಖುಷಿ ಆಯಿತು.
ಅದಕ್ಕಾಗಿ ನಿನ್ನನ್ನು ನಾನು ಒಪ್ಪಿಕೊಂಡೆ.
"ನಿನ್ನನ್ನು ಬಿಟ್ಟು ಬಾಳುವ ಶಕ್ತಿ ನನಗಿಲ್ಲ ನಾನು ಇಲ್ಲಿಯವರೆಗೂ ಬದುಕಿರುವುದೆಂದರೆ ಅದು ನಿನ್ನಿಂದಲೇ.
ಇನ್ನು ಮುಂದೆ ನನ್ನ ಜೊತೆ ನನ್ನ ಜೀವನ ಸಂಗಾತಿಯಾಗಿ ಇರುತ್ತೀಯ ಎಂದು ಭಾವಿಸಿದ್ದೇನೆ.
ನೀನು ನನ್ನಿಂದ ದುರವಾದರೆ ಆಕ್ಷಣವೇ ನಾನು ಈ ಪ್ರಪಂಚವನ್ನು ಬಿಟ್ಟು ಹೋಗುತೇನೆ"
ನನಗೆ ಪತ್ರ ಬರೆಯಲು ಬರುವುದಿಲ್ಲ ಏನಾದರು ತಪಿದ್ದರೆ ಮನ್ನಿಸು.
ನಿನ್ನ ಸಂತೋಷವನ್ನು ಸದಾಕಾಲ ಹಾರೈಸುವ...
ಇಂತಿ ನಿನ್ನ ಪ್ರೀತಿಯ
ಚೈತ್ರ
thanks janu
ReplyDelete